ಜಿಲ್ಲೆಯಲ್ಲಿ ಈ ದಿನ ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 08 ರಸ್ತೆ ಅಪಘಾತ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 3 ಯು.ಡಿ.ಆರ್. ಪ್ರಕರಣಗಳು, 1 ಮಾನಭಂಗ ಪ್ರಕರಣ, 1 ಕಳ್ಳತನ ಪ್ರಕರಣ ಮತ್ತು 7 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣ
ಕೆರಗೋಡು ಪೊಲೀಸ್ ಠಾಣೆ
1] ಮೊ.ಸಂ. 26/10 ಕಲಂ. ಹೆಂಗಸು ಕಾಣೆಯಾಗಿದ್ದಾಳೆ. ಕಾಣೆಯಾದ ಹುಡುಗಿ ಆರ್. ಪೂರ್ಣಿಮಾ ಎಂಬುವವರು 2 ವರ್ಷಗಳ ಹಿಂದೆ ಗುಡಿಗೇನಹಳ್ಳಿ ಗ್ರಾಮದ ಶಶಿಕುಮಾರ ಎಂಬುವರೊಂದಿಗೆ ಮಧುವೆಯಾಗಿದ್ದು ದಿ: 05-02-10 ರಂದು ಶಶಿಕುಮಾರ ರವರು ಫಿರ್ಯಾದಿ ರಾಮಯ್ಯ ರವರಿಗೆ ಪೋನ್ ಮಾಡಿ ಈ ದಿನ ರಾತ್ರಿ 9:00 ಗಂಟೆಯಿಂದ ಪೂರ್ಣಿಮಾಳು ಅವರ ಮಗುವೊಂದಿಗೆ ಕಾಣೆಯಾಗಿರುತ್ತಾಳೆಂದು ತಿಳಿಸಿರುತ್ತಾರೆ.
ಯು.ಡಿ.ಆರ್. ಪ್ರಕರಣ
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ
1] ಯು.ಡಿ.ಆರ್. ನಂ 01/10 ಕಲಂ 174 ಸಿಆರ್.ಪಿ.ಸಿ. ಮೃತೆ ಆಶಾ, 23 ವರ್ಷ ರವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ದಿ: 06-02-10 ರಂದು ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.
ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ
2] ಯು.ಡಿ.ಆರ್. ನಂ 02/10 ಕಲಂ 174 ಸಿಆರ್.ಪಿ.ಸಿ. ಮೃತ ವೆಂಕಟೇಶ ರವರು ಹುಣಸೆ ಮರದಲ್ಲಿ ಹುಣಸೆ ಹಣ್ಣು ಕಿಳುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟಿರುತ್ತಾನೆ.
ಮಂಡ್ಯ ಪೂರ್ವ ಪೊಲೀಸ್ ಠಾಣೆ
3] ಯು.ಡಿ.ಆರ್. ನಂ. 04/10 ಕಲಂ 174 ಸಿಆರ್.ಪಿ.ಸಿ. ಮೃತ ಹುಮಾಯಿನ್ ಷರೀಪ್ ರವರಿಗೆ ರಸ್ತೆ ಅಪಘಾತವಾಗಿ ತೀವ್ರವಾಗಿ ಗಾಯಗೊಂಡಿದ್ದು ಈ ಸಂಬಂಧವಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿ: 07-02-10 ರಂದು ಮೃತಪಟ್ಟಿರುತ್ತಾನೆ.
ಮಾನಭಂಗ ಪ್ರಕರಣ
ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ
1] ಮೊ.ಸಂ. 43/10 ಕಲಂ 420-376-306 ರೆ/ವಿ 34 ಐಪಿಸಿ ಆರೋಪಿ ಕಿರಣ ಮೃತೆ ಆಶಾಳನ್ನು ಪ್ರೀತಿಸುತ್ತಿದ್ದು ಮತ್ತು ಹಠಸಂಭೋಗ ಮಾಡಿದ್ದು, ಮಧುವೆಯಾಗುವುದಾಗಿ ನಂಬಿಸಿ ನಿರಾಕರಿಸಿದಾಗ ಈ ಬಗ್ಗೆ ಗ್ರಾಮದಲ್ಲಿ 06-02-10 ರಂದು ಪಂಚಾಯ್ತಿ ಮಾಡಿದರೂ ನನಗೂ ಮತ್ತು ಆಶಾಳಿಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಆರೋಪಿ ಕಿರಣ ಹೇಳಿದರಿಂದ ಮೃತ ಆಶಾ ಮನನೊಂದು ಮನೆಯಲ್ಲಿ ನೋಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ.
ಕಳ್ಳತನ ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ
1] ಮೊ.ಸಂ 77/10 ಕಲಂ 379 ಐಪಿಸಿ ದಿ: 06-02-10 ರಂದು ಫಿರ್ಯಾದಿ ಡಿ. ವೆಂಕಟೇಶ ಅವರ ಬಾಬ್ತು ಹೀರೊಹೊಂಡಾ ಮೋಟಾರ್ ಸೈಕಲ್ ನಂ ಕೆಎ-11-ಎಸ್-4917 ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
ರಸ್ತೆ ಅಪಘಾತ ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ
1] ಮೊ.ಸಂ. 78/10 ಕಲಂ 279, 337, 338, 304[ಎ] ಐಪಿಸಿ ರೆ/ವಿ 187 ಐಎಂವಿ ಕಾಯ್ದೆ ದಿ: 07-02-10 ರಂದು ಆರೋಪಿ ಟ್ರಾಕ್ಟರ್ ಚಾಲಕ ನಂ ಕೆಎ-11-ಟಿ-6987 ಅನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ವಾಹನವು ಬಳಘಟ್ಟ ಗ್ರಾಮದ ಉರಳಿ ಅದರಲ್ಲಿದ್ದ 1 ಮಹಿಳೆ ಮೃತಪಟ್ಟಿದ್ದು ಇನ್ನು ಉಳಿದ 25-30 ಜನರಿಗೆ ತೀವ್ರ ತರವಾದ ಗಾಯವಾಗಿರುತ್ತೆ.