Karnataka State Police

Beta                               

Mandya District Daily Crime Report Date: 10-03-2010



Posted by mandya on March 11, 2010

ಜಿಲ್ಲೆಯಲ್ಲಿ ಈ ದಿನ ಒಟ್ಟು 20 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 07 ರಸ್ತೆ ಅಪಘಾತ ಪ್ರಕರಣಗಳು, 1 ಮನುಷ್ಯ ಕಾಣಾಯಾದ ಪ್ರಕರಣ, 2 ಕಳ್ಳತನ ಪ್ರಕರಣಗಳು, 2 ಯು.ಡಿ.ಆರ್. ಪ್ರಕರಣಗಳು, 1 ವಂಚನೆ ಪ್ರಕರಣ, 1 ಆತ್ಮಹತ್ಯೆ ಪ್ರಯತ್ನ ಮತ್ತು 6 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.

ಮನುಷ್ಯ ಕಾಣಾಯಾದ ಪ್ರಕರಣ
ಮದ್ದೂರು ಪೊಲೀಸ್ ಠಾಣೆ 
1] ಮೊ.ಸಂ 138/10 ಕಲಂ. ಹೆಂಗಸು ಮತ್ತು ಮಕ್ಕಳು ಕಾಣೆಯಾಗಿದ್ದಾರೆ. ದಿನಾಂಕ 05-03-10 ರಂದು ಕಾಣೆಯಾದ ಹೆಂಗಸು ರತ್ನಮ್ಮ ಮತ್ತು ಆಕೆಯ ಮಕ್ಕಳಾದ ರಶ್ಮಿತಾ ಮತ್ತು ರಕ್ಷಿತಾರೊಡನೆ ಮನೆಯಿಂದ ಹೊರೆಗೆ ಹೊರಟು ಹೋಗಿರುತ್ತಾಳೆ.
ಕಳ್ಳತನ ಪ್ರಕರಣ
ಶ್ರೀರಂಗಪಟ್ಟಣ ಪೊಲೀಸ್ ಠಾಣೆ 
1] ಮೊ.ಸಂ 118/10 ಕಲಂ 379 ಐಪಿಸಿ ದಿನಾಂಕ 07-03-10 ರಂದು ಪಿರ್ಯಾದಿ ಕೆ. ಮಹೇಶ ರವರು ಅವರ ಬಾಬ್ತು ಟಿ.ವಿ.ಎಸ್. ಎಕ್ಸ್.ಎಲ್. ಸೂಪರ್ ಮೊಪೆಡ್ ನಂ ಕೆಎ-11-ಯು-5296 ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಪಾಂಡವಪುರ ಪೊಲೀಸ್ ಠಾಣೆ 
2] ಮೊ.ಸಂ 138/10 ಕಲಂ 379 ಐಪಿಸಿ ದಿನಾಂಕ 10-03-10 ರಂದು ಯಾರೋ ಕಳ್ಳರು ಪಿರ್ಯಾದಿ ಜಿ. ಗಿರೀಗೌಡ ರವರ ಬಾಬ್ತು ಹಣದ ಬ್ಯಾಗನ್ನು ಸೈಕಲ್ ಗೆ ನೇತು ಹಾಕಿ ಅಂಗಡಿಯ ಸಾಮಾನುಗಳನ್ನು ತೆಗೆದು ಕೊಂಡು ಬಂದು ನೋಡಲಾಗಿ ಯಾರೋ ಕಳ್ಳರು ಹಣದ ಬ್ಯಾಗ್ ಅದರಿಲ್ಲಿದ 34.000/- ರೂಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಯು.ಡಿ.ಆರ್. ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ 
1] ಯು.ಡಿ.ಆರ್. ನಂ 10/10 ಕಲಂ 174 ಸಿಆರ್.ಪಿ.ಸಿ ಮೃತೆ ಯಶೋಧಮ್ಮ ಎಂಬುವವರು ತನ್ನಗಿದ್ದ ಗರ್ಭಕೋಶದ ತೊಂದರೆ ಹಾಗೂ ಹೊಟ್ಟೆ ನೋವಿನಿಂದ ಜಿಗುಪ್ಸೆಗೊಂಡು ಯಾವುದೋ ಕ್ರಿವಿನಾಶಕವನ್ನು ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.
ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ 
2] ಯು.ಡಿ.ಆರ್. 07/10 ಕಲಂ 174 ಸಿಆರ್.ಪಿ.ಸಿ. 07-03-10 ರಂದು ಮೃತ ಸಾದನ ಬಿಸಿ ನೀರಿನ ಪಾತ್ರೆ ಅಕಸ್ಮಿಕವಾಗಿ ಬಿದ್ದು ಮೃತಳ ಮೇಮೇಲೆ ಬಿದ್ದು ಮೃತಳಿಗೆ ಸುಟ್ಟು ಗಾಯಗಳಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ.
ರಸ್ತೆ ಅಪಘಾತ ಪ್ರಕರಣ 
ಬಿಂಡಿಗನವಿಲೆ ಪೊಲೀಸ್ ಠಾಣೆ 
ಮೊ.ಸಂ. 20/10 ಕಲಂ 279, 304[ಎ] ಐಪಿಸಿ ದಿನಾಂಕ 10-03-10 ರಂದು ಆರೋಪಿ ಅಪರಿಚಿತ ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ತಿಮ್ಮೇಗೌಡ ಎಂಬುವವರ ಟಿ.ವಿ.ಎಸ್. ಮೊಪೆಡ್ ನಂ ಕೆಎ-04-ಇವಿ-6254 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ತಿಮ್ಮೇಗೌಡ ರವರು ಮೃತಪಟ್ಟಿರುತ್ತಾರೆ.
ವಂಚನೆ ಪ್ರಕರಣ
ಮಂಡ್ಯ ಪೂರ್ವ ಪೊಲೀಸ್ ಠಾಣೆ 
1] ಮೊ.ಸಂ 39/10 ಕಲಂ 203-468-471 ಐಪಿಸಿ ಆರೋಪಿ ಮೋಟಾರ್ ಸೈಕಲ್ ಸವಾರ ಇನ್ಸೂರೆನ್ಸ್ ಹಣ ಪಡೆಯುವ ಉದ್ದೇಶದಿಂದ ತನ್ನ ವಾಹನ ನಂ ಕೆಎ-11-3478 ರ ಅಪಘಾತವಾಗಿ ಎಂದು ಸುಳ್ಳು ಕೇಸು ದಾಖಲು ಮಾಡಿ ಇನ್ಸೂರೆನ್ಸ್ ಕಂಪನಿಗೆ ಮೋಸ ಮಾಡಿದ ಬಗ್ಗೆ.
ಆತ್ಮಹತ್ಯೆಗೆ ಪ್ರಯತ್ನ ಪ್ರಕರಣ
ಕೆ.ಆರ್. ಪೇಟ್ ಟೌನ್ ಪೊಲೀಸ್ ಠಾಣೆ 
1] ಮೊ.ಸಂ 47/10 ಕಲಂ 309 ಐಪಿಸಿ ದಿನಾಂಕ 10-03-10 ರಂದು ಮಧ್ಯಾಹ್ನ 01-00 ಗಂಟೆಯ ಸಮಯದಲ್ಲಿ ಆರೋಪಿ ದಿಲೀಪ್ ನು ಯಾವುದೇ ವಿಷ ಸೇವನೆ ಮಾಡಿ ಅತ್ಮಹತ್ಯೆ ಪ್ರಯತ್ನ ಪಟ್ಟಿದ್ದು ಈ ಬಗ್ಗೆ ಕೆ.ಆರ್. ಪೇಟೆ ಸರ್ಕಾರಿ ಆಸ್ಪತ್ರೆ ಯ ಮೆಮೊ ಆಧಾರಿಸಿ ಕೇಸು ದಾಖಲು ಮಾಡಿಕೊಂಡಿರುತ್ತೆ.